ಅನುರಾಧಾ ಪೌಡ್ವಾಲ್ ಅಥವಾ ಅನುರಾಧಾ ಪೊಡ್ವಾಲ್ (ಹುಟ್ಟು: ೧೯೫೪), ಪ್ರಮುಖ ಭಾರತೀಯ ಹಿನ್ನೆಲೆ ಗಾಯಕಿ. ಅನುರಾಧಾ ತಮ್ಮ ಹೆಚ್ಚಿನ ಹಾಡುಗಳನ್ನು ಒಡಿಯಾ ಭಾಷೆಯಲ್ಲಿ ಹಾಡಿದ್ದಾರೆ. ಅಲ್ಲದೇ ಹಿಂದಿ, ಮರಾಠಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಸಂಸ್ಕೃತ ಮುಂತಾದ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಇವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ೨೦೧೭ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ಮತ್ತು ನಾಲ್ಕು ಬಾರಿ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಇವರು ಚಲನಚಿತ್ರ ಗೀತೆಗಳಲ್ಲದೆ ಭಜನೆಗಳನ್ನೂ ಹಾಡುತ್ತಾರೆ. == ಜನನ == ಅನುರಾಧಾ ಅವರ ಹುಟ್ಟುಹೆಸರು ಅಲ್ಕಾ ನಾಡಕರ್ಣಿ. ೧೯೫೪ರ ಅಕ್ಟೋಬರ್ ೨೭ರಂದು ಕಾರವಾರದಲ್ಲಿ ಜನಿಸಿದರು. == ವೈಯಕ್ತಿಕ ಜೀವನ == ಇವರು ಅರುಣ್ ಪೌಡ್ವಾಲ್‌ರವರನ್ನು ವಿವಾಹವಾಗಿದ್ದಾರೆ. ಇವರ ಪುತ್ರ ಆದಿತ್ಯ ಪೌಡ್ವಾಲ್‌ ಮತ್ತು ಪುತ್ರಿ ಕವಿತಾ ಪೌಡ್ವಾಲ್‌. ಕವಿತಾರವರು ಸಂಗೀತಗಾರ್ತಿಯಾಗಿದ್ದಾರೆ. == ಪ್ರಶಸ್ತಿ ಮತ್ತು ಮನ್ನಣೆಗಳು == ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ೨೦೧೩ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮೊಹಮ್ಮದ್ ರಫಿ ಪ್ರಶಸ್ತಿ ಪಡೆದಿದ್ದಾರೆ. ೨೦೧೧ರಲ್ಲಿ ಜೀವಮಾನದ ಸಾಧನೆಗಾಗಿ ಮದರ್ ತೆರೆಸಾ ಪ್ರಶಸ್ತಿ ಪಡೆದಿದ್ದಾರೆ. ೨೦೧೦ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆದಿದ್ದಾರೆ. === ಫಿಲ್ಮ್‌ಫೇರ್ ಪ್ರಶಸ್ತಿಗಳು === ==== ಗೆದ್ದ ಪ್ರಶಸ್ತಿಗಳು ==== ==== ನಾಮನಿರ್ದೇಶನಗೊಂಡ ಪ್ರಶಸ್ತಿಗಳು ==== === ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ === ಅನುರಾಧಾರವರಿಗೆ ೧೯೮೯ರಲ್ಲಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕಲಾಟ್ ನಕಲಾತ್ ಚಲನಚಿತ್ರದ ಹಿ ಏಕ್ ರೇಷಮಿ ಹಾಡಿಗೆ, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂದು ಪಡೆದರು. === ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಗಳು === === ಗಿಲ್ಡ್ ಫಿಲ್ಮ್ ಅವಾರ್ಡ್ಸ್ === ೨೦೦೪ರಲ್ಲಿ ಅತ್ಯುತ್ತಮ ಗಾಯಕಿ ಎಂದು ಅಪ್ಸರಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. === ಇತರ ಪ್ರಶಸ್ತಿ === ಅನುರಾಧಾ ಪದ್ಮಶ್ರೀ ಡಾ ಡಿವೈ ಪಾಟೀಲ್ ವಿಶ್ವವಿದ್ಯಾಲಯವು ಡಿ ಲಿಟ್ ಪದವಿ ನೀಡಿ ಗೌರವಿಸಿತು. == ಕನ್ನಡ ಹಾಡುಗಳು == ಅನುರಾಧ ಮೊದಲು ಕನ್ನಡದಲ್ಲಿ ಹಾಡಿದ್ದು ಜೀವನದಿ ಚಿತ್ರಕ್ಕೆ. ಆ ಚಿತ್ರದ "ಕನ್ನಡ ನಾಡಿನ ಜೀವನದಿ" ಹಾಡು ಜನಪ್ರಿಯವಾಯಿತು. ಪ್ರೀತ್ಸೆ ಚಿತ್ರದ '"ಸೈ ಸೈ", "ಯಾರಿಟ್ಟರೀ ಚುಕ್ಕಿ", "ಹೋಳಿ ಹೋಳಿ" ಹಾಡುಗಳು ಕನ್ನಡದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು. ಅನುರಾಧ ಅವರು ಹಾಡಿರುವ ಕನ್ನಡ ಚಿತ್ರಗೀತೆಗಳ ಪಟ್ಟಿ: == ನೋಡಿ == ಅನುರಾಧಾ ಪೌಡ್ವಾಲ್ ರವರ ಧ್ವನಿಮುದ್ರಿಸಿದ ಹಾಡುಗಳ ಪಟ್ಟಿ. == ಉಲ್ಲೇಖಗಳು ==